ಭಾನುವಾರ, ಜೂನ್ 12, 2011

ಪ್ರೇಕ್ಷಕರನ್ನು ಹುಚ್ಚೆಬ್ಬಿಸಲಿರುವ ‘ಬದ್ರಿನಾಥ್’

ತೆಲುಗು ಹಾಗೂ ಮಲಯಾಳಿಗಳ ಕನಸಿನ ನಾಯಕ ಅಲ್ಲು ಅರ್ಜುನ್, ‘ಬದ್ರಿನಾಥ್’ ಮೂಲಕ ಮತ್ತೆ ಪ್ರೇಕ್ಷಕರ ಮನಸೂರೆಗೈಯಲು ಬರುತ್ತಿದ್ದಾನೆ. ತಮನ್ನ ಚಿತ್ರದ ನಾಯಕಿ. ಸೆಮಿ ಪೀರಿಯಾಡಿಕಲ್ ಸಿನೆಮಾ ಎಂಬ ವಿಶೇಷತೆಯಿರುವ ಈ ಚಿತ್ರದಲ್ಲಿ ಅಲ್ಲು, ಎಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಅತಿ ಶಕ್ತದಾದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಚಿತ್ರದ ಬಜೆಟ್ 40 ಕೋಟಿ ರೂ.ಗಳಾಗಿದ್ದು, ಚಿತ್ರವನ್ನು ಅಲ್ಲು ನಿರ್ಮಿಸಿದ್ದಾರೆ. ವಿವಿ ವಿನಾಯಕ್ ಚಿತ್ರದ ನಿರ್ದೇಶಕ. ತೆಲುಗು ಸಿನೆಮಾ ಸಿಬ್ಬಂದಿಯ ಮುಷ್ಕರದಿಂದಾಗಿ ಚಿತ್ರದ ಶೂಟಿಂಗ್ ಈ ನಡುವೆ ಸ್ಥಗಿತವಾಗಿತ್ತಾದರೂ, ದೊಡ್ಡ ಸಮಸ್ಯೆಗಳಿಲ್ಲದೆ ಚಿತ್ರದ ಶೂಟಿಂಗ್‌ನ್ನು ಪೂರ್ಣ ಮಾಡಿ ಬಿಡುಗಡೆ ಗೊಳಿಸಲಾಗಿದೆ. ತಮಿಳಿನಲ್ಲಿ ಖ್ಯಾತಿ ಪಡೆಯುತ್ತಿರುವ ತಮ್ಮನ್ನಾಳಿಗೆ ಈ ಚಿತ್ರ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಡಲಿದೆ.
ಹ್ಯಾಪಿ, ಬನ್ನಿ ಸೇರಿದಂತೆ ಅಲ್ಲುವಿನ ಚಿತ್ರಗಳೆಲ್ಲವೂ ಕೇರಳದಲ್ಲಿಯೂ ಸೂಪರ್‌ಹಿಟ್‌ಗಳಾಗಿತ್ತು. ಈ ಚಿತ್ರವು ಕೂಡಾ ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗಲಿದೆ. ಅಲ್ಲುವಿನ ಹಿಂದಿನ ಚಿತ್ರಗಳು ತಂದು ಕೊಟ್ಟ ಲಾಭವನ್ನು ಬದ್ರಿನಾಥ್‌ನಲ್ಲೂ ನಿರೀಕ್ಷಿಸಲಾಗಿದೆ. ಅಲ್ಲುವಿನ ಎಂದಿನ ರೊಮಾಂಟಿಕ್ ಸಿನೆಮಾಗಳಿಗಿಂತ ಈ ಚಿತ್ರ ಭಿನ್ನವಾಗಲಿದೆ.
‘ಗಂಗೋತ್ರಿ’ ಅಲ್ಲು ಅರ್ಜುನ್ ಮೊದಲು ನಾಯಕನಾಗಿ ಅಭಿನಯಿಸಿದ ಚಿತ್ರವಾಗಿತ್ತು. ಅಲ್ಲು ಅರ್ಜುನ್ ಸಿನೆಮಾರಂಗಕ್ಕೆ ಕಾಲಿರಿಸಿದ್ದು ಚಿರಂಜೀವಿ ನಾಯಕನಾಗಿದ್ದ ಚಿತ್ರವಾದ ‘ಡ್ಯಾಡಿ’ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ. ಅದರನಂತರ ಆರ್ಯ, ಬನ್ನಿ, ಹ್ಯಾಪಿ, ದೇಶಮುದ್ರ, ಪರುಗು ಮೊದಲಾದ ಹಲವು ಚಿತ್ರಗಳು ಬಂದವು. ಎಲ್ಲವೂ ಸೂಪರ್‌ಹಿಟ್ಸ್. ಓರ್ವ ನಟನಿಗೆ ಅತ್ಯಂತ ಹೆಚ್ಚು ಅಭಿಮಾನಿಗಳಿರುವುದು ಇದೇ ಮೊದಲಾಗಿದೆ.


ಅಲ್ಲುವಿನ ವಿವಾಹದ ಬಳಿಕ ಬಿಡುಗಡೆಯಾಗುವ ಮೊದಲ ಬಿಗ್‌ಬಜೆಟ್ ಚಿತ್ರ ಎಂಬ ವಿಶೇಷತೆಯೂ ‘ಬದ್ರಿನಾಥ್’ಗಿದೆ. ಆದಿ, ಕೃಷ್ಣ, ದಿಲ್ ಮತ್ತಿತರ ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ವಿ.ವಿ.ವಿನಾಯಕ್ ಬದ್ರಿನಾಥ್‌ನ ನಿರ್ದೇಶಕ. ಅಲ್ಲು ಅಭಿನಯಿಸಿದ ‘ಬನ್ನಿ’ಯ ನಿರ್ದೇಶಕರೂ ಕೂಡಾ ಇದೇ ವಿನಾಯಕ್.

ಬುಧವಾರ, ಮೇ 18, 2011

ಕಚಗುಳಿಯಿಡಲಿದೆ ‘ಡಾಕ್ಟರ್‌ ಲವ್‌’

ವಿನಯಚಂದ್ರನ್‌ ಒಬ್ಬ ಬರಹಗಾರ. ಕವಿತೆ, ಕಥೆಗಳನ್ನು ಬರೆಯುತಾ್ತನಾದರೂ ಆತನಿಗೆ ಇನೊ್ನಂದು ಅತ್ಯಂತ ಮುಖ್ಯವಾದ ಹವಾ್ಯಸವಿದೆ.


ಪ್ರೇಮ ಪ್ರಕರಣಕಕ್ೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹುಡುಕಿ ಪ್ರೇಮಿಗಳನ್ನು ಒಂದು ಸೇರಿಸುವುದರಲ್ಲಿ ವಿನಯಚಂದ್ರನದ್ದು ಸಿದ್ಧಹಸ್ತ. ಏನಿದರ ರಹಸ್ಯ ಎಂದು ಕೇಳಿದರೆ ವಿನಯಚಂದ್ರನಲ್ಲೂ ಉತ್ತರವಿಲ್ಲ. ಹಾಗೆ ಸಂಭವಿಸುತ್ತದೆ, ಅಷ್ಟೆ.
ಒನ್‌ವೇ ಪ್ರೇಮ, ಪರಸ್ಪರ ಬೇರ್ಪಟ್ಟವರು ಹೀಗೆ ಪ್ರೇಮಕಕ್ೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವಿನಯಚಂದ್ರನನ್ನು ಹಲವು ಸಹಪಾಠಿಗಳು ಹುಡುಕಿಕೊಂಡು ಬರುತ್ತಿರುತಾ್ತರೆ. ವಹಿಸಿಕೊಂಡ ಎಲ್ಲ ಪ್ರೇಮ ಪ್ರಕರಣಗಳನ್ನು ಸುಖಾಂತ್ಯಗೊಳಿಸಿದ ವಿನಯಚಂದ್ರನ ಸಾಮರ್ಥ್ಯವನ್ನು ಅರಿತ ಕಾಲೇಜಿನ ಪಿಟಿ ಅಧಾ್ಯಪಕ ಸತ್ಯಶೀಲನ್‌, ವಿನಯಚಂದ್ರನನ್ನು ಸಂಪರ್ಕಿಸಿ ಕೆಲ ವಿಷಯಗಳನ್ನು ಹೇಳುತಾ್ತನೆ.
ಮಾರನೆ ದಿನವೇ ವಿನಯಚಂದ್ರನ್‌ ಕಾಲೇಜಿಗೆ ಸೇರುತಾ್ತನೆ. ವಿದಾ್ಯರ್ಥಿಯಾಗಿಯಲ್ಲ, ಕಾಲೇಜಿನ ಕಾ್ಯಂಟೀನ್‌ನಲ್ಲಿ ಕೆಲಸಗಾರನಾಗಿ. ಆದರೆ ವಿನಯಚಂದ್ರನ ಗುರಿ ಬೇರೊಂದಿರುತ್ತದೆ.
ಕೆಲವೇ ದಿನಗಳಲ್ಲಿ ವಿನಯಚಂದ್ರನ್‌ನ ನೈಜ ಹವಾ್ಯಸಗಳು ವಿದಾ್ಯರ್ಥಿಗಳಿಗೆ ಗೊತಾ್ತಗುತ್ತದೆ. ಆತನನ್ನು ಹುಡುಕಿಕೊಂಡು ವಿದಾ್ಯರ್ಥಿಗಳ ದಂಡೇ ಬರುತ್ತದೆ. ಹಾಗೆ ಅಲ್ಲಿಯೂ ವಿನಯಚಂದ್ರನ್‌ ರೊಮಾನ್‌‌ಸ ಕನ್ಸಲ್ಟಂಟ್‌ ಆಗುತಾ್ತನೆ. ಹೀಗೆ ಕಾ್ಯಂಪಸ್‌ನಲ್ಲಿ ನಡೆಯುವ ಸಾ್ವರಸ್ಯಪೂರ್ಣವೂ, ಕುತೂಹಲಭರಿತವೂ ಆದ ಮುಹೂರ್ತಗಳನ್ನು ‘ಡಾಕ್ಟರ್‌ ಲವ್‌’ ಎಂಬ ಮಲಯಾಳಂ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಕುಂಜಾಕೊ ಬೋಬನ್‌ ವಿನಯಚಂದ್ರನಾಗಿ ಮೆರೆಯುತ್ತಿರುವಾಗ ಸತ್ಯಶೀಲನಾಗಿ ಇನೊ್ನಸೆಂಟ್‌ ಪ್ರತ್ಯಕ್ಷನಾಗುತಾ್ತನೆ. ಭಾವನ ಹಾಗೂ ಅನನ್ಯ ನಾಯಕಿಯರು. ದಿವಾ್ಯ ಉಣ್ಣಿಯ ತಂಗಿ ವಿದಾ್ಯ ಉಣ್ಣಿ ಈ ಚಿತ್ರದ ಮೂಲಕ ಅಭಿನಯ ಕ್ಷೇತ್ರಕಕ್ೆ ಪಾದಾರ್ಪಣೆ ಮಾಡುತ್ತಿದಾ್ದರೆ.
ಸಲೀಂ ಕುಮಾರ್‌, ನೆಡುಮುಡಿ ವೇಣು, ವಿಜಯರಾಘವನ್‌, ಮಣಿಕುಟ್ಟನ್‌, ಭಗತ್‌ ಮಾ್ಯನ್ವಲ್‌, ಪ್ರಕಾಶನ್‌, ಅಜು ವರ್ಗೀಸ್‌, ಹೇಮಂತ್‌, ರಜತ್‌ ಮೆನನ್‌, ಶಾ್ರವಣ್‌, ಹಿಲ್ಟನ್‌, ಅರುಣ್‌, ಕಲಾಭವನ್‌ ರಿಯಾಸ್‌, ಬಿಯೋಣ್‌, ಬೈಜು, ಕೊಚ್ಚು ಪ್ರೇಮನ್‌, ನಿಮಿಷ, ಶಾರಿ, ದಿವ್ಯ, ಬಿಂದು ಪಣ್ಣಿಕಕ್ರ್‌, ಕೆಪಿಎಸಿ ಲಲಿತ, ಜಿಲು, ಧನ್ಯ, ಜಿಕೊಕ್ ಚಿತ್ರದಲ್ಲಿ ಅಭಿನಯಿಸಿದಾ್ದರೆ.
ಯುವ ತಾರೆಗಳನ್ನು ಮುಂದಿಟ್ಟುಕೊಂಡು ಉದಯೋನ್ಮುಖ ನಿರ್ದೇಶಕ ಕೆ.ಬಿಜು ಕಥೆ ಬರೆದು ನಿರ್ದೇಶಿಸುತ್ತಿರುವ ಮಲಯಾಳಂ ಚಿತ್ರವೇ ‘ಡಾಕ್ಟರ್‌ ಲವ್‌’. ‘ಮಮ್ಮಿ ಆ್ಯಂಡ್‌ ಮಿ’ ಎಂಬ ಹಿಟ್‌ ಚಿತ್ರದ ಬಳಿಕ ಜಿತಿನ್‌ ಆರ್ಟಿಸ್‌‌ಟನ ಬಾ್ಯನರ್‌ನಲ್ಲಿ ಜೋಯ್‌ ತೋಮಸ್‌ ಶಕ್ತಿ ಕುಳಂಙ್ಙರ ಈ ಚಿತ್ರವನ್ನು ನಿರ್ಮಿಸಿದಾ್ದರೆ.

ಸೋಮವಾರ, ಮೇ 2, 2011

‘ಞಾನ್‌ ಸಂಜಾರಿ’ ಒಂದು ಕುತೂಹಲಕಾರಿ ಚಿತ್ರ


ಬಾಲು ಒಬ್ಬ ಆಟೊ ಡ್ರೈವರ್‌. ತಂದೆ ತಾಯಿಯಿಲ್ಲದ ಬಾಲು, ಕೆಟ್ಟವಳಾದ ಮಲತಾಯಿ ಹಾಗೂ ಸಹೋದರಿಯೊಂದಿಗೆ ಬದುಕು ನಡೆಸುತ್ತಿದಾ್ದನೆ. ಆಟೊ ಓಡಿಸಿ ಸಿಗುವ ಸಣ್ಣ ಮೊತ್ತದ ಆದಾಯದಿಂದ ಕುಟುಂಬವನ್ನು ಸಾಕಲು ಬಾಲುವಿಗೆ ಸಾಧ್ಯವಾಗುವುದಿಲ್ಲ.
ಗೋಪು, ಬ್ರೂಚಾನ್‌ ಎಂಬ ಇಬ್ಬರು ಸ್ನೇಹಿತರು ಮಾತ್ರ ಬಾಲುವಿನ ಪಾಲಿಗೆ ನೆಮ್ಮದಿ ತರುವವರು. ಒಂದು ದಿನ ಬಾಲು ರಾತ್ರಿ ಮನೆಗೆ ಬಂದಾಗ ಚಿಕಕ್ಮ್ಮನ ಬಂಧುವೊಬ್ಬನಿರುತಾ್ತನೆ. ಇದರ ಮುಂದುವರಿದ ಭಾಗವಾಗಿ ಮಲತಾಯಿ ಬಾಲುವನ್ನು ಮನೆಯಿಂದ ಹೊರ ಹಾಕುತಾ್ತಳೆ.
ಎಲ್ಲವನ್ನೂ ಮರೆತು ಸ್ನೇಹಿತರೊಂದಿಗೆ ಕುಡಿದು ಬದುಕು ಹಾಳು ಮಾಡಿಕೊಳ್ಳುತ್ತಿರುವಾಗ ರಾಧಿಕಾ ಎಂಬ ಹುಡುಗಿ ರಕ್ಷಣೆ ಕೋರಿ ಓಡಿ ಬರುತಾ್ತಳೆ. ಅವಳನ್ನು ಹಿಂಬಾಲಿಸಿ ಬಂದ ಗೂಂಡಾ ಗಳೊಂದಿಗಿನ ಹೊಡೆದಾಟದಲ್ಲಿ ಬಾಲುವಿನ ಸ್ನೇಹಿತರು ಸಾವನ್ನಪ್ಪು ತಾ್ತರೆ. ಇದರ ಮಧ್ಯೆ ಬಾಲು ಹಾಗೂ ರಾಧಿಕಾ ಓಡಿ ಬಚಾ ವಾಗುತಾ್ತರೆ. ಅನಂತರ ರೈಲಿನಲ್ಲಿ ಗಾ್ರಮವೊಂದಕಕ್ೆ ಬರುತಾ್ತರೆ.
ಅಪರಿಚಿತವಾದ ಆ ಗಾ್ರಮದಲ್ಲಿ ಬಾಲು-ರಾಧಿಕಾಗೆ, ಮಕಕ್ಳಿಲ್ಲದ ದೇವಸ್ಯ-ಸಾರಮ್ಮ ದಂಪತಿಯ ಪರಿಚಯವಾಗುತ್ತದೆ. ಆ ದಂಪತಿ ಬಾಲು ಹಾಗೂ ರಾಧಿಕಾಳನ್ನು ಪ್ರೀತಿಯಿಂದ ತಮ್ಮ ಮನೆಯಲ್ಲಿರಿಸಿಕೊಳ್ಳುತಾ್ತರೆ. ಜೀವನ ನಡೆಸಲು, ಸಾಲ ಮಾಡಿ ಒಂದು ಆಟೊ ರಿಕಾ್ಷವನ್ನು ಖರೀದಿಸಿ ಬಾಲುವಿಗೆ ಕೊಡಿಸುತಾ್ತರೆ.
ಯಾವುದೇ ಕಷ್ಟಗಳಿಲ್ಲದೆ ಜೀವನ ನಡೆಯುತ್ತಿರುವಾಗ ಬಾಲು ರಾಧಿಕಾಳನ್ನು ಮದುವೆಯಾಗುತಾ್ತನೆ. ಅವರಿಗೆ ಎರಡು ಹೆಣ್ಣು ಮಕಕ್ಳೂ ಜನಿಸುತಾ್ತರೆ.
ಈ ಮಧ್ಯೆ ಹಿಂದೆ ರಾಧಿಕಾಳನ್ನು ಅಕ್ರಮಿಸಲು ಬಂದಿದ್ದ ಗೂಂಡಾ ಸಾಕಿ ಇದೇ ಗಾ್ರಮಕಕ್ೆ ಬರುತಾ್ತನೆ. ಸಾಕಿ ಬಂದ ವಿಷಯ ತಿಳಿದ ಬಾಲು ಹಾಗೂ ಕುಟುಂಬ ಪಲಾಯನ ಮಾಡಲು ಶ್ರಮಿಸುತ್ತದೆ. ಆದರೆ ವಿಧಿ ಬಾಲುವಿಗೆ ವಿರುದ್ಧವಾಗಿರುತ್ತದೆ. ಬಳಿಕ ನಡೆಯುವ ಘಟನೆಗಳೇ ‘ಞಾನ್‌ ಸಂಜಾರಿ’ (ನಾನು ಸಂಚಾರಿ) ಎಂಬ ಮಲಯಾಳಂ ಚಿತ್ರದಲ್ಲಿ ದೃಶಾ್ಯವಿಷಾಕ್ರವಾಗಿದೆ.
ಆದಿತ್ಯ ಫಿಲಂ ಇಂಟರ್‌ನಾ್ಯಷನಲ್‌ನ ಬಾ್ಯನರ್‌ನಲ್ಲಿ ರಾಜೇಶ್‌ ಬಾಲಚಂದ್ರನ್‌ ಕಥೆ ಬರೆದು ನಿರ್ದೇಶಿಸುತ್ತಿರುವ ‘ಞಾನ್‌ ಸಂಜಾರಿ’ ಎಂಬ ಚಿತ್ರದಲ್ಲಿ ಬಾಲುವಾಗಿ ಪ್ರಶಾಂತ್‌ ಪುನ್ನಪ್ರ, ನಾಯಕಿಯಾಗಿ ಉದಯೋನ್ಮುಖ ನಟಿ ಸೋನಿಯಾ ಶ್ರೀಧರ್‌ ಅಭಿನಯಿಸಲಿದಾ್ದರೆ. ಕಲಾಶಾಲ ಬಾಬು, ಕೊಲ್ಲಂ ತುಳಸಿ, ಷಮ್ಮಿ ತಿಲಕನ್‌, ಅನಿಲ್‌ ಮುರಳಿ, ಮಚಾ್ಚನ್‌ ವರ್ಗೀಸ್‌, ಕಲಾಭವನ್‌ ನಿಯಾಝ್‌, ಕೊಲ್ಲಂ ಜಿ.ಕೆ ಪಿಳ್ಳ, ಸಾಗರ್‌ ಷಿಯಾಸ್‌, ಅರುಮುಗಂ, ಉಷಾ, ಕಲ್ಪನಾ, ಮಾಯಾ ವೌಷ್‌ಮಿ, ಊರ್ಮಿಳ ಉಣ್ಣಿ ಮತ್ತಿತರರು ನಟಿಸಲಿದಾ್ದರೆ.

ಶುಕ್ರವಾರ, ಏಪ್ರಿಲ್ 29, 2011

‘ಬಾಂಬೆ ಮಾರ್ಚ್‌ 12’ರಲ್ಲಿ ಮಮ್ಮುಟ್ಟಿ

ಬಾಬು ಜನಾರ್ದನನ್‌ ನಿರ್ದೇಶಕನಾಗುತ್ತಿದಾ್ದರೆ. ಮಾಂದ್ರಿಗಂ, ತಚ್ಚಿಲೇಡತ್‌‌ತ ಚುಂಡನ್‌, ಅಚ್ಚನುರಙ್ಙಿಾತ್ತ


ವೀಡ್‌, ವಾಸ್ತವಂ ಮತ್ತಿತರ ಚಿತ್ರಗಳಿಗೆ ಕಥೆ ಬರೆದ ಬಾಬು ಜನಾರ್ದನನ್‌ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಬಾಂಬೆ ಮಾರ್ಚ್‌ 12’ ಎಂಬ ಚಿತ್ರದಲ್ಲಿ ಮಲಯಾಳಂ ಮೆಗಾಸಾ್ಟರ್‌ ಮಮ್ಮುಟ್ಟಿ ನಾಯಕನಾಗಿ ಅಭಿನಯಿಸಲಿದಾ್ದರೆ.
1993ರಲ್ಲಿ ಬಾಂಬೆಯಲ್ಲಿ ನಡೆದ ಬಾಂಬ್‌ ಸ್ಫೀಟ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಮದಾ್ರಸಿನಲ್ಲಿ ಒಂದು ಬಿಗ್‌ಬಜೆಟ್‌ ಸಿನೆಮಾದ ಪೂಜೆಗೆ ನೇತೃತ್ವ ನೀಡಲು ಆಗಮಿಸುವ ಸನಾತನನ್‌ ಭಟ್‌ ಎಂಬ ಪೂಜಾರಿ, ಆಲಪ್ಪುಝದಿಂದ ಕೆಲಸ ಹುಡುಕಿಕೊಂಡು ಬಾಂಬೆ ಮಹಾನಗರ ತಲುಪುವ ಒಬ್ಬ ಮುಸ್ಲಿಮ್‌ ಯುವಕ, ಈತನ ಪ್ರೀಡಿಗ್ರಿಯಾದ ಸಹೋದರಿ ಆಮಿನ. ಈ ಮೂವರಿಗೂ ಬಾಂಬೆ ಸ್ಫೀಟ ಪ್ರಕರಣದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಸ್ಫೀಟದ ಬಳಿಕ ಇವರು ತಮ್ಮ ಬದುಕಿನಲ್ಲಿ ಹಲವು ಆಕಸ್ಮಿಕ ಘಟನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಬಳಿಕ ನಡೆಯುವ ಘಟನೆಗಳೇ ಚಿತ್ರದ ಪ್ರಮೇಯ.
ಮುಖ್ಯ ಕಥಾ ಪಾತ್ರವಾದ ಸನಾತನ ಭಟ್‌ ಎಂಬ ಪೂಜಾರಿಯ ವೇಷದಲ್ಲಿ ಮಮ್ಮುಟ್ಟಿ ಕಾಣಿಸಿಕೊಳ್ಳಲಿದಾ್ದರೆ. ಮಮ್ಮುಟ್ಟಿಯ ವಿಭಿನ್ನವಾದ ಒಂದು ಕಥಾಪಾತ್ರವೂ ಇದಾಗಿದೆ. ಅಸಾಮಾನ್ಯ ಅಭಿನಯ ಮುಹೂರ್ತಗಳ ಮೂಲಕ ಮಮ್ಮುಟ್ಟಿಯ ಪಾತ್ರ ಹಾದು ಹೋಗಲಿದೆ. ಸ್ನೇಹ ಸಂಬಂಧಗಳಿಗೆ ಪಾ್ರಮುಖ್ಯತೆ ನೀಡುವುದರೊಂದಿಗೆ ಕೆಲ ಬದುಕಿನ ವಾಸ್ತವಗಳನ್ನು ಚಿತ್ರ ತೋರಿಸುತ್ತದೆ.
ರೆಡ್‌ ರೋಸ್‌ ಕ್ರಿಯೇಷನ್‌‌ಸನ ಬಾ್ಯನರಿನಲ್ಲಿ ಮುಹಮ್ಮದ್‌ ಹನೀಫ್‌ ನಿರ್ಮಿಸುತ್ತಿರುವ ಬಾಂಬೆ ಮಾರ್ಚ್‌ 12ರ ಮೊದಲ ಭಾಗದ ಚಿತ್ರೀಕರಣ ರಾಜಸಾ್ಥನ್‌, ಮುಂಬೈ, ಕೊಯಂಬತ್ತೂರ್‌ಗಳಲ್ಲಿ, ದ್ವಿತೀಯ ಭಾಗ ಕೇರಳದಲ್ಲಿ ನಡೆಯಲಿದೆ.

ಗುರುವಾರ, ಜನವರಿ 20, 2011

ಗೊತ್ತಿಲ್ಲ

ಅವಳಪ್ಪ ಅಮ್ಮ ಅಣ್ಣಂದಿರಲ್ಲಾ ಗೊತ್ತು
ಅವರೆಲ್ಲರ ವಿಳಾಸ ನಂಬ್ರ ಕೂಡಾ ಗೊತ್ತು

ಗೊತ್ತಿಲ್ಲದ್ದೀಗ ಅವಳು ಮಾತ್ರ.......!

ಹೆಣ್ಣು

ಆಧುನಿಕ ಹೆಣ್ಣೆ,

ನಿಜವಾಗಿಯೂ ನೀ ದಿಟ್ಟೆ

ಹೆಣ್ಣೇನೆಂಬುದವನೆಲ್ಲ ನೀ ತೆರದಿಟ್ಟೆ.......!