ಸೋಮವಾರ, ಮೇ 2, 2011
‘ಞಾನ್ ಸಂಜಾರಿ’ ಒಂದು ಕುತೂಹಲಕಾರಿ ಚಿತ್ರ
ಬಾಲು ಒಬ್ಬ ಆಟೊ ಡ್ರೈವರ್. ತಂದೆ ತಾಯಿಯಿಲ್ಲದ ಬಾಲು, ಕೆಟ್ಟವಳಾದ ಮಲತಾಯಿ ಹಾಗೂ ಸಹೋದರಿಯೊಂದಿಗೆ ಬದುಕು ನಡೆಸುತ್ತಿದಾ್ದನೆ. ಆಟೊ ಓಡಿಸಿ ಸಿಗುವ ಸಣ್ಣ ಮೊತ್ತದ ಆದಾಯದಿಂದ ಕುಟುಂಬವನ್ನು ಸಾಕಲು ಬಾಲುವಿಗೆ ಸಾಧ್ಯವಾಗುವುದಿಲ್ಲ.
ಗೋಪು, ಬ್ರೂಚಾನ್ ಎಂಬ ಇಬ್ಬರು ಸ್ನೇಹಿತರು ಮಾತ್ರ ಬಾಲುವಿನ ಪಾಲಿಗೆ ನೆಮ್ಮದಿ ತರುವವರು. ಒಂದು ದಿನ ಬಾಲು ರಾತ್ರಿ ಮನೆಗೆ ಬಂದಾಗ ಚಿಕಕ್ಮ್ಮನ ಬಂಧುವೊಬ್ಬನಿರುತಾ್ತನೆ. ಇದರ ಮುಂದುವರಿದ ಭಾಗವಾಗಿ ಮಲತಾಯಿ ಬಾಲುವನ್ನು ಮನೆಯಿಂದ ಹೊರ ಹಾಕುತಾ್ತಳೆ.
ಎಲ್ಲವನ್ನೂ ಮರೆತು ಸ್ನೇಹಿತರೊಂದಿಗೆ ಕುಡಿದು ಬದುಕು ಹಾಳು ಮಾಡಿಕೊಳ್ಳುತ್ತಿರುವಾಗ ರಾಧಿಕಾ ಎಂಬ ಹುಡುಗಿ ರಕ್ಷಣೆ ಕೋರಿ ಓಡಿ ಬರುತಾ್ತಳೆ. ಅವಳನ್ನು ಹಿಂಬಾಲಿಸಿ ಬಂದ ಗೂಂಡಾ ಗಳೊಂದಿಗಿನ ಹೊಡೆದಾಟದಲ್ಲಿ ಬಾಲುವಿನ ಸ್ನೇಹಿತರು ಸಾವನ್ನಪ್ಪು ತಾ್ತರೆ. ಇದರ ಮಧ್ಯೆ ಬಾಲು ಹಾಗೂ ರಾಧಿಕಾ ಓಡಿ ಬಚಾ ವಾಗುತಾ್ತರೆ. ಅನಂತರ ರೈಲಿನಲ್ಲಿ ಗಾ್ರಮವೊಂದಕಕ್ೆ ಬರುತಾ್ತರೆ.
ಅಪರಿಚಿತವಾದ ಆ ಗಾ್ರಮದಲ್ಲಿ ಬಾಲು-ರಾಧಿಕಾಗೆ, ಮಕಕ್ಳಿಲ್ಲದ ದೇವಸ್ಯ-ಸಾರಮ್ಮ ದಂಪತಿಯ ಪರಿಚಯವಾಗುತ್ತದೆ. ಆ ದಂಪತಿ ಬಾಲು ಹಾಗೂ ರಾಧಿಕಾಳನ್ನು ಪ್ರೀತಿಯಿಂದ ತಮ್ಮ ಮನೆಯಲ್ಲಿರಿಸಿಕೊಳ್ಳುತಾ್ತರೆ. ಜೀವನ ನಡೆಸಲು, ಸಾಲ ಮಾಡಿ ಒಂದು ಆಟೊ ರಿಕಾ್ಷವನ್ನು ಖರೀದಿಸಿ ಬಾಲುವಿಗೆ ಕೊಡಿಸುತಾ್ತರೆ.
ಯಾವುದೇ ಕಷ್ಟಗಳಿಲ್ಲದೆ ಜೀವನ ನಡೆಯುತ್ತಿರುವಾಗ ಬಾಲು ರಾಧಿಕಾಳನ್ನು ಮದುವೆಯಾಗುತಾ್ತನೆ. ಅವರಿಗೆ ಎರಡು ಹೆಣ್ಣು ಮಕಕ್ಳೂ ಜನಿಸುತಾ್ತರೆ.
ಈ ಮಧ್ಯೆ ಹಿಂದೆ ರಾಧಿಕಾಳನ್ನು ಅಕ್ರಮಿಸಲು ಬಂದಿದ್ದ ಗೂಂಡಾ ಸಾಕಿ ಇದೇ ಗಾ್ರಮಕಕ್ೆ ಬರುತಾ್ತನೆ. ಸಾಕಿ ಬಂದ ವಿಷಯ ತಿಳಿದ ಬಾಲು ಹಾಗೂ ಕುಟುಂಬ ಪಲಾಯನ ಮಾಡಲು ಶ್ರಮಿಸುತ್ತದೆ. ಆದರೆ ವಿಧಿ ಬಾಲುವಿಗೆ ವಿರುದ್ಧವಾಗಿರುತ್ತದೆ. ಬಳಿಕ ನಡೆಯುವ ಘಟನೆಗಳೇ ‘ಞಾನ್ ಸಂಜಾರಿ’ (ನಾನು ಸಂಚಾರಿ) ಎಂಬ ಮಲಯಾಳಂ ಚಿತ್ರದಲ್ಲಿ ದೃಶಾ್ಯವಿಷಾಕ್ರವಾಗಿದೆ.
ಆದಿತ್ಯ ಫಿಲಂ ಇಂಟರ್‌ನಾ್ಯಷನಲ್‌ನ ಬಾ್ಯನರ್‌ನಲ್ಲಿ ರಾಜೇಶ್ ಬಾಲಚಂದ್ರನ್ ಕಥೆ ಬರೆದು ನಿರ್ದೇಶಿಸುತ್ತಿರುವ ‘ಞಾನ್ ಸಂಜಾರಿ’ ಎಂಬ ಚಿತ್ರದಲ್ಲಿ ಬಾಲುವಾಗಿ ಪ್ರಶಾಂತ್ ಪುನ್ನಪ್ರ, ನಾಯಕಿಯಾಗಿ ಉದಯೋನ್ಮುಖ ನಟಿ ಸೋನಿಯಾ ಶ್ರೀಧರ್ ಅಭಿನಯಿಸಲಿದಾ್ದರೆ. ಕಲಾಶಾಲ ಬಾಬು, ಕೊಲ್ಲಂ ತುಳಸಿ, ಷಮ್ಮಿ ತಿಲಕನ್, ಅನಿಲ್ ಮುರಳಿ, ಮಚಾ್ಚನ್ ವರ್ಗೀಸ್, ಕಲಾಭವನ್ ನಿಯಾಝ್, ಕೊಲ್ಲಂ ಜಿ.ಕೆ ಪಿಳ್ಳ, ಸಾಗರ್ ಷಿಯಾಸ್, ಅರುಮುಗಂ, ಉಷಾ, ಕಲ್ಪನಾ, ಮಾಯಾ ವೌಷ್‌ಮಿ, ಊರ್ಮಿಳ ಉಣ್ಣಿ ಮತ್ತಿತರರು ನಟಿಸಲಿದಾ್ದರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ತೆಲುಗು ಹಾಗೂ ಮಲಯಾಳಿಗಳ ಕನಸಿನ ನಾಯಕ ಅಲ್ಲು ಅರ್ಜುನ್, ‘ಬದ್ರಿನಾಥ್’ ಮೂಲಕ ಮತ್ತೆ ಪ್ರೇಕ್ಷಕರ ಮನಸೂರೆಗೈಯಲು ಬರುತ್ತಿದ್ದಾನೆ. ತಮನ್ನ ಚಿತ್ರದ ನಾಯಕಿ. ಸೆಮಿ ಪೀರಿಯಾಡಿ...
-
ಕನ್ನಡ ನಾಡಿನ ಸ್ವರ್ಗ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆಯೇ ನೀರು ಬತ್ತಿ ಬರಿದಾಗಿದ್ದ ಬಂಡೆಗಳು ಮರುಜೀವ ಪಡೆಯುತ್ತವೆ. ಕೊಡಗಿನಲ್ಲಿ ಹಲ...
-
ಬಾಲು ಒಬ್ಬ ಆಟೊ ಡ್ರೈವರ್. ತಂದೆ ತಾಯಿಯಿಲ್ಲದ ಬಾಲು, ಕೆಟ್ಟವಳಾದ ಮಲತಾಯಿ ಹಾಗೂ ಸಹೋದರಿಯೊಂದಿಗೆ ಬದುಕು ನಡೆಸುತ್ತಿದಾ್ದನೆ. ಆಟೊ ಓಡಿಸಿ ಸಿಗುವ ಸಣ್ಣ ಮೊತ್ತದ ಆದಾಯದಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ