ಬಾಬು ಜನಾರ್ದನನ್ ನಿರ್ದೇಶಕನಾಗುತ್ತಿದಾ್ದರೆ. ಮಾಂದ್ರಿಗಂ, ತಚ್ಚಿಲೇಡತ್‌ತ ಚುಂಡನ್, ಅಚ್ಚನುರಙ್ಙಿಾತ್ತ
ವೀಡ್, ವಾಸ್ತವಂ ಮತ್ತಿತರ ಚಿತ್ರಗಳಿಗೆ ಕಥೆ ಬರೆದ ಬಾಬು ಜನಾರ್ದನನ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಬಾಂಬೆ ಮಾರ್ಚ್ 12’ ಎಂಬ ಚಿತ್ರದಲ್ಲಿ ಮಲಯಾಳಂ ಮೆಗಾಸಾ್ಟರ್ ಮಮ್ಮುಟ್ಟಿ ನಾಯಕನಾಗಿ ಅಭಿನಯಿಸಲಿದಾ್ದರೆ.
1993ರಲ್ಲಿ ಬಾಂಬೆಯಲ್ಲಿ ನಡೆದ ಬಾಂಬ್ ಸ್ಫೀಟ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಮದಾ್ರಸಿನಲ್ಲಿ ಒಂದು ಬಿಗ್‌ಬಜೆಟ್ ಸಿನೆಮಾದ ಪೂಜೆಗೆ ನೇತೃತ್ವ ನೀಡಲು ಆಗಮಿಸುವ ಸನಾತನನ್ ಭಟ್ ಎಂಬ ಪೂಜಾರಿ, ಆಲಪ್ಪುಝದಿಂದ ಕೆಲಸ ಹುಡುಕಿಕೊಂಡು ಬಾಂಬೆ ಮಹಾನಗರ ತಲುಪುವ ಒಬ್ಬ ಮುಸ್ಲಿಮ್ ಯುವಕ, ಈತನ ಪ್ರೀಡಿಗ್ರಿಯಾದ ಸಹೋದರಿ ಆಮಿನ. ಈ ಮೂವರಿಗೂ ಬಾಂಬೆ ಸ್ಫೀಟ ಪ್ರಕರಣದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಸ್ಫೀಟದ ಬಳಿಕ ಇವರು ತಮ್ಮ ಬದುಕಿನಲ್ಲಿ ಹಲವು ಆಕಸ್ಮಿಕ ಘಟನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಬಳಿಕ ನಡೆಯುವ ಘಟನೆಗಳೇ ಚಿತ್ರದ ಪ್ರಮೇಯ.
ಮುಖ್ಯ ಕಥಾ ಪಾತ್ರವಾದ ಸನಾತನ ಭಟ್ ಎಂಬ ಪೂಜಾರಿಯ ವೇಷದಲ್ಲಿ ಮಮ್ಮುಟ್ಟಿ ಕಾಣಿಸಿಕೊಳ್ಳಲಿದಾ್ದರೆ. ಮಮ್ಮುಟ್ಟಿಯ ವಿಭಿನ್ನವಾದ ಒಂದು ಕಥಾಪಾತ್ರವೂ ಇದಾಗಿದೆ. ಅಸಾಮಾನ್ಯ ಅಭಿನಯ ಮುಹೂರ್ತಗಳ ಮೂಲಕ ಮಮ್ಮುಟ್ಟಿಯ ಪಾತ್ರ ಹಾದು ಹೋಗಲಿದೆ. ಸ್ನೇಹ ಸಂಬಂಧಗಳಿಗೆ ಪಾ್ರಮುಖ್ಯತೆ ನೀಡುವುದರೊಂದಿಗೆ ಕೆಲ ಬದುಕಿನ ವಾಸ್ತವಗಳನ್ನು ಚಿತ್ರ ತೋರಿಸುತ್ತದೆ.
ರೆಡ್ ರೋಸ್ ಕ್ರಿಯೇಷನ್‌ಸನ ಬಾ್ಯನರಿನಲ್ಲಿ ಮುಹಮ್ಮದ್ ಹನೀಫ್ ನಿರ್ಮಿಸುತ್ತಿರುವ ಬಾಂಬೆ ಮಾರ್ಚ್ 12ರ ಮೊದಲ ಭಾಗದ ಚಿತ್ರೀಕರಣ ರಾಜಸಾ್ಥನ್, ಮುಂಬೈ, ಕೊಯಂಬತ್ತೂರ್‌ಗಳಲ್ಲಿ, ದ್ವಿತೀಯ ಭಾಗ ಕೇರಳದಲ್ಲಿ ನಡೆಯಲಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ಆಧುನಿಕ ಹೆಣ್ಣೆ, ನಿಜವಾಗಿಯೂ ನೀ ದಿಟ್ಟೆ ಹೆಣ್ಣೇನೆಂಬುದವನೆಲ್ಲ ನೀ ತೆರದಿಟ್ಟೆ.......!
-
ತೆಲುಗು ಹಾಗೂ ಮಲಯಾಳಿಗಳ ಕನಸಿನ ನಾಯಕ ಅಲ್ಲು ಅರ್ಜುನ್, ‘ಬದ್ರಿನಾಥ್’ ಮೂಲಕ ಮತ್ತೆ ಪ್ರೇಕ್ಷಕರ ಮನಸೂರೆಗೈಯಲು ಬರುತ್ತಿದ್ದಾನೆ. ತಮನ್ನ ಚಿತ್ರದ ನಾಯಕಿ. ಸೆಮಿ ಪೀರಿಯಾಡಿ...