ಭಾನುವಾರ, ಜೂನ್ 12, 2011

ಪ್ರೇಕ್ಷಕರನ್ನು ಹುಚ್ಚೆಬ್ಬಿಸಲಿರುವ ‘ಬದ್ರಿನಾಥ್’

ತೆಲುಗು ಹಾಗೂ ಮಲಯಾಳಿಗಳ ಕನಸಿನ ನಾಯಕ ಅಲ್ಲು ಅರ್ಜುನ್, ‘ಬದ್ರಿನಾಥ್’ ಮೂಲಕ ಮತ್ತೆ ಪ್ರೇಕ್ಷಕರ ಮನಸೂರೆಗೈಯಲು ಬರುತ್ತಿದ್ದಾನೆ. ತಮನ್ನ ಚಿತ್ರದ ನಾಯಕಿ. ಸೆಮಿ ಪೀರಿಯಾಡಿಕಲ್ ಸಿನೆಮಾ ಎಂಬ ವಿಶೇಷತೆಯಿರುವ ಈ ಚಿತ್ರದಲ್ಲಿ ಅಲ್ಲು, ಎಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಅತಿ ಶಕ್ತದಾದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಚಿತ್ರದ ಬಜೆಟ್ 40 ಕೋಟಿ ರೂ.ಗಳಾಗಿದ್ದು, ಚಿತ್ರವನ್ನು ಅಲ್ಲು ನಿರ್ಮಿಸಿದ್ದಾರೆ. ವಿವಿ ವಿನಾಯಕ್ ಚಿತ್ರದ ನಿರ್ದೇಶಕ. ತೆಲುಗು ಸಿನೆಮಾ ಸಿಬ್ಬಂದಿಯ ಮುಷ್ಕರದಿಂದಾಗಿ ಚಿತ್ರದ ಶೂಟಿಂಗ್ ಈ ನಡುವೆ ಸ್ಥಗಿತವಾಗಿತ್ತಾದರೂ, ದೊಡ್ಡ ಸಮಸ್ಯೆಗಳಿಲ್ಲದೆ ಚಿತ್ರದ ಶೂಟಿಂಗ್‌ನ್ನು ಪೂರ್ಣ ಮಾಡಿ ಬಿಡುಗಡೆ ಗೊಳಿಸಲಾಗಿದೆ. ತಮಿಳಿನಲ್ಲಿ ಖ್ಯಾತಿ ಪಡೆಯುತ್ತಿರುವ ತಮ್ಮನ್ನಾಳಿಗೆ ಈ ಚಿತ್ರ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಡಲಿದೆ.
ಹ್ಯಾಪಿ, ಬನ್ನಿ ಸೇರಿದಂತೆ ಅಲ್ಲುವಿನ ಚಿತ್ರಗಳೆಲ್ಲವೂ ಕೇರಳದಲ್ಲಿಯೂ ಸೂಪರ್‌ಹಿಟ್‌ಗಳಾಗಿತ್ತು. ಈ ಚಿತ್ರವು ಕೂಡಾ ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗಲಿದೆ. ಅಲ್ಲುವಿನ ಹಿಂದಿನ ಚಿತ್ರಗಳು ತಂದು ಕೊಟ್ಟ ಲಾಭವನ್ನು ಬದ್ರಿನಾಥ್‌ನಲ್ಲೂ ನಿರೀಕ್ಷಿಸಲಾಗಿದೆ. ಅಲ್ಲುವಿನ ಎಂದಿನ ರೊಮಾಂಟಿಕ್ ಸಿನೆಮಾಗಳಿಗಿಂತ ಈ ಚಿತ್ರ ಭಿನ್ನವಾಗಲಿದೆ.
‘ಗಂಗೋತ್ರಿ’ ಅಲ್ಲು ಅರ್ಜುನ್ ಮೊದಲು ನಾಯಕನಾಗಿ ಅಭಿನಯಿಸಿದ ಚಿತ್ರವಾಗಿತ್ತು. ಅಲ್ಲು ಅರ್ಜುನ್ ಸಿನೆಮಾರಂಗಕ್ಕೆ ಕಾಲಿರಿಸಿದ್ದು ಚಿರಂಜೀವಿ ನಾಯಕನಾಗಿದ್ದ ಚಿತ್ರವಾದ ‘ಡ್ಯಾಡಿ’ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ. ಅದರನಂತರ ಆರ್ಯ, ಬನ್ನಿ, ಹ್ಯಾಪಿ, ದೇಶಮುದ್ರ, ಪರುಗು ಮೊದಲಾದ ಹಲವು ಚಿತ್ರಗಳು ಬಂದವು. ಎಲ್ಲವೂ ಸೂಪರ್‌ಹಿಟ್ಸ್. ಓರ್ವ ನಟನಿಗೆ ಅತ್ಯಂತ ಹೆಚ್ಚು ಅಭಿಮಾನಿಗಳಿರುವುದು ಇದೇ ಮೊದಲಾಗಿದೆ.


ಅಲ್ಲುವಿನ ವಿವಾಹದ ಬಳಿಕ ಬಿಡುಗಡೆಯಾಗುವ ಮೊದಲ ಬಿಗ್‌ಬಜೆಟ್ ಚಿತ್ರ ಎಂಬ ವಿಶೇಷತೆಯೂ ‘ಬದ್ರಿನಾಥ್’ಗಿದೆ. ಆದಿ, ಕೃಷ್ಣ, ದಿಲ್ ಮತ್ತಿತರ ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ವಿ.ವಿ.ವಿನಾಯಕ್ ಬದ್ರಿನಾಥ್‌ನ ನಿರ್ದೇಶಕ. ಅಲ್ಲು ಅಭಿನಯಿಸಿದ ‘ಬನ್ನಿ’ಯ ನಿರ್ದೇಶಕರೂ ಕೂಡಾ ಇದೇ ವಿನಾಯಕ್.

2 ಕಾಮೆಂಟ್‌ಗಳು:

  1. ಈ ಚಿತ್ರದಲ್ಲಿ ಅಲ್ಲು ಅರವಿಂದ್ ಅವರು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಇವರ ಗುರುಗಳಾಗಿ ಶ್ರೀ ಪ್ರಕಾಶ ರಾಜ್ ರವರು ಸಹ ತುಂಬಾ ಅತ್ಯುತ್ತಮ ವಾಗಿ ಅಭಿನಯಸಿದ್ದಾರೆ. ಈ ಚಿತ್ರವನ್ನು ನೋಡಿದವರು ಮತ್ತೊಮ್ಮೆ ನೊಡಲು ಇಷ್ಟ ಪಡುತ್ತಾರೆ ಎಂಬ ನನ್ನ ಭಾವನೆ.
    ಸಂಜೀವರೆಡ್ಡಿ ಎಂ.ಎಸ್‌.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಸಂಜೀವ ರೆಡ್ಡಿಯವರಿಗೆ.....ನೀವು ಎಷ್ಟು ಸಲ ಈ ಸಿನಿಮಾ ನೋಡಿದ್ದೀರಿ......ಅಲ್ಲು ಅರ್ಜುನ್ ಒಬ್ಬ ಒಳ್ಳೆಯ ಕಲಾವಿದ, ನೃತ್ಯಪಟು ಕೂಡಾ.

    ಪ್ರತ್ಯುತ್ತರಅಳಿಸಿ