ಸೋಮವಾರ, ಆಗಸ್ಟ್ 27, 2012

ಸೌಂದರ್ಯಕ್ಕೆ ಹೆಸರಾಗಿರುವ ಕೊಡಗಿನ ‘ಅಬ್ಬಿ ಪಾಲ್ಸ್’

ಕನ್ನಡ ನಾಡಿನ ಸ್ವರ್ಗ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆಯೇ ನೀರು ಬತ್ತಿ ಬರಿದಾಗಿದ್ದ ಬಂಡೆಗಳು ಮರುಜೀವ ಪಡೆಯುತ್ತವೆ. ಕೊಡಗಿನಲ್ಲಿ ಹಲವಾರು ಪ್ರಕೃತಿ ರಮಣೀಯವಾದ ಜಲಪಾತಗಳಿವೆ. ಇವುಗಳ ಪೈಕಿ ‘ಅಬ್ಬಿ ಪಾಲ್ಸ್’ (ಜಲಪಾತ) ಒಂದಾಗಿದ್ದು, ಇದು ಮುಖ್ಯಪಟ್ಟಣ ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆ ಬೀಳುತ್ತಿದ್ದಂತೆಯೇ ಬೇಸಿಗೆಯ ಬಿಸಿಲಿಗೆ ಸೊರಗಿ ಹೆಬ್ಬಂಡೆಯ ಮಧ್ಯೆ ಮಯವಾದ ಎಲ್ಲಾ ಜಲಪಾತಗಳು ಮರುಜನ್ಮ ಪಡೆಯುತ್ತವೆ. ಮಡಿಕೇರಿಯಿಂದ ಮುಂದಕ್ಕೆ ಸುಮಾರು 8 ಕಿ.ಮೀ.ದೂರ ಚಲಿಸಿದರೆ ಈ ‘ಅಬ್ಬಿ ಜಲಪಾತ’ ಕಾಣ ಸಿಗುತ್ತದೆ. ಈ ಜಲಪಾತವನ್ನು ವೀಕ್ಷಣೆ ಮಾಡಲು ತೆರಳುವವರಿಗೆ ಮಡಿಕೇರಿಯಿಂದ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬೇಕಾಗುತ್ತದೆ.
ಇನ್ನು ನಡೆದುಕೊಂಡು ಹೋಗುದಾದರೆ 200 ಮೀ. ನಷ್ಟು ಅಂಕುಡೊಂಕಾದ ರಸ್ತೆಯಲ್ಲಿ ಅರಣ್ಯ, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ.ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ.
ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ನಮಗೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.
ವಿಶಾಲ ಹೆಬಂಡೆಗಳ ನಡುವೆ ಸುಮಾರು ನೂರಾ ಐದು ಅಡಿಯಷ್ಟು ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ನೋಡಬಹುದು. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡುವುದೇ ಕಣ್ಣಿಗೊಂದು ಹಬ್ಬ. ಜಲಪಾತದ ಸೊಬಗನ್ನು ಪ್ರವಾಸಿಗರಿಗೆ ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.
ಅಪಾಯಕಾರಿ ಜಲಪಾತ: ಅಬ್ಬಿ ಜಲಪಾತ ನೋಡಲು ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿ. ಬೇಸಿಗೆಯ ದಿನಗಳಲ್ಲಿ ಜಲಪಾತದಲ್ಲಿ ನೀರಿನ ಭೋರ್ಗರೆತ ಕಡಿಮೆಯಾದಾಗ ಹೆಚ್ಚಿನ ಪ್ರವಾಸಿಗರು ಜಲಧಾರೆಯಾಗಿ ಧುಮುಕಿ ಬಳಿಕ ನದಿಯಾಗಿ ಹರಿದು ಹೋಗುವ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಕೆಲವರು ಜಲಪಾತದ ಬಳಿ ಹಾಕಲಾಗಿರುವ ಎಚ್ಚರಿಕೆಯ ನಾಮಫಲಕವನ್ನೂ ಗಮನಿಸದೆ ನೇರವಾಗಿ ಜಲಪಾತದ ತಳಭಾಗಕ್ಕೆ ತೆರಳಿ ಧುಮುಕುವ ಜಲಧಾರೆಗೆ ತಲೆಕೊಟ್ಟು ಸ್ನಾನಮಾಡುವ ಸಾಹಸ ಮಾಡುತ್ತಾರೆ. 
ಇದು ಎಷ್ಟೊಂದು ಅಪಾಯಕಾರಿ ಎಂಬುವುದಕ್ಕೆ ಇದುವರೆಗೆ ಇಲ್ಲಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಸುಮಾರು ಮಂದಿ ಸಾಕ್ಷಿಯಾಗುತ್ತಾರೆ. ಇನ್ನು ಕೊಡಗಿಗೆ ಬರುವ ದೂರದ ಪ್ರವಾಸಿಗರಿಗೆ ಇಲ್ಲಿ ಹರಿಯವ ನೀರೆಲ್ಲಾ ಕಾವೇರಿ ನೀರು ಎಂಬ ನಂಬಿಕೆ. ಹಾಗಾಗಿ ಅಬ್ಬಿಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂಡ ಜಲಪಾತದಲ್ಲಿ ಸ್ನಾನ ಮಾಡುವುದು ಪವಿತ್ರ ಎಂದುಕೊಳ್ಳುತ್ತಾರೆ. 
ಅಷ್ಟೇ ಅಲ್ಲ ಈ ನೀರನ್ನು ಕೆಲವರು ಪವಿತ್ರ ತೀರ್ಥ ಎಂದು ತಮ್ಮೊಂದಿಗೆ ಕೊಂಡೊಯ್ಯವ ಪ್ರಯತ್ನವನ್ನು ಮಾಡುತ್ತಾರೆ. ಈ ಕೊಳಚೆ ನೀರಿಗೆ ಹಲವು ನದಿ ತೊರೆಗಳು ಸೇರುವುದರಿಂದ ಜಲಪಾತವನ್ನು ತಲುಪುವ ವೇಳೆಗೆ ನೀರು ಶುದ್ಧವಾಗಬಹುದು ಆದರೂ ಎಚ್ಚರವಾಗಿರುವುದು ಒಳಿತು.

ಭಾನುವಾರ, ಜೂನ್ 12, 2011

ಪ್ರೇಕ್ಷಕರನ್ನು ಹುಚ್ಚೆಬ್ಬಿಸಲಿರುವ ‘ಬದ್ರಿನಾಥ್’

ತೆಲುಗು ಹಾಗೂ ಮಲಯಾಳಿಗಳ ಕನಸಿನ ನಾಯಕ ಅಲ್ಲು ಅರ್ಜುನ್, ‘ಬದ್ರಿನಾಥ್’ ಮೂಲಕ ಮತ್ತೆ ಪ್ರೇಕ್ಷಕರ ಮನಸೂರೆಗೈಯಲು ಬರುತ್ತಿದ್ದಾನೆ. ತಮನ್ನ ಚಿತ್ರದ ನಾಯಕಿ. ಸೆಮಿ ಪೀರಿಯಾಡಿಕಲ್ ಸಿನೆಮಾ ಎಂಬ ವಿಶೇಷತೆಯಿರುವ ಈ ಚಿತ್ರದಲ್ಲಿ ಅಲ್ಲು, ಎಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಅತಿ ಶಕ್ತದಾದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಚಿತ್ರದ ಬಜೆಟ್ 40 ಕೋಟಿ ರೂ.ಗಳಾಗಿದ್ದು, ಚಿತ್ರವನ್ನು ಅಲ್ಲು ನಿರ್ಮಿಸಿದ್ದಾರೆ. ವಿವಿ ವಿನಾಯಕ್ ಚಿತ್ರದ ನಿರ್ದೇಶಕ. ತೆಲುಗು ಸಿನೆಮಾ ಸಿಬ್ಬಂದಿಯ ಮುಷ್ಕರದಿಂದಾಗಿ ಚಿತ್ರದ ಶೂಟಿಂಗ್ ಈ ನಡುವೆ ಸ್ಥಗಿತವಾಗಿತ್ತಾದರೂ, ದೊಡ್ಡ ಸಮಸ್ಯೆಗಳಿಲ್ಲದೆ ಚಿತ್ರದ ಶೂಟಿಂಗ್‌ನ್ನು ಪೂರ್ಣ ಮಾಡಿ ಬಿಡುಗಡೆ ಗೊಳಿಸಲಾಗಿದೆ. ತಮಿಳಿನಲ್ಲಿ ಖ್ಯಾತಿ ಪಡೆಯುತ್ತಿರುವ ತಮ್ಮನ್ನಾಳಿಗೆ ಈ ಚಿತ್ರ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಡಲಿದೆ.
ಹ್ಯಾಪಿ, ಬನ್ನಿ ಸೇರಿದಂತೆ ಅಲ್ಲುವಿನ ಚಿತ್ರಗಳೆಲ್ಲವೂ ಕೇರಳದಲ್ಲಿಯೂ ಸೂಪರ್‌ಹಿಟ್‌ಗಳಾಗಿತ್ತು. ಈ ಚಿತ್ರವು ಕೂಡಾ ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗಲಿದೆ. ಅಲ್ಲುವಿನ ಹಿಂದಿನ ಚಿತ್ರಗಳು ತಂದು ಕೊಟ್ಟ ಲಾಭವನ್ನು ಬದ್ರಿನಾಥ್‌ನಲ್ಲೂ ನಿರೀಕ್ಷಿಸಲಾಗಿದೆ. ಅಲ್ಲುವಿನ ಎಂದಿನ ರೊಮಾಂಟಿಕ್ ಸಿನೆಮಾಗಳಿಗಿಂತ ಈ ಚಿತ್ರ ಭಿನ್ನವಾಗಲಿದೆ.
‘ಗಂಗೋತ್ರಿ’ ಅಲ್ಲು ಅರ್ಜುನ್ ಮೊದಲು ನಾಯಕನಾಗಿ ಅಭಿನಯಿಸಿದ ಚಿತ್ರವಾಗಿತ್ತು. ಅಲ್ಲು ಅರ್ಜುನ್ ಸಿನೆಮಾರಂಗಕ್ಕೆ ಕಾಲಿರಿಸಿದ್ದು ಚಿರಂಜೀವಿ ನಾಯಕನಾಗಿದ್ದ ಚಿತ್ರವಾದ ‘ಡ್ಯಾಡಿ’ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ. ಅದರನಂತರ ಆರ್ಯ, ಬನ್ನಿ, ಹ್ಯಾಪಿ, ದೇಶಮುದ್ರ, ಪರುಗು ಮೊದಲಾದ ಹಲವು ಚಿತ್ರಗಳು ಬಂದವು. ಎಲ್ಲವೂ ಸೂಪರ್‌ಹಿಟ್ಸ್. ಓರ್ವ ನಟನಿಗೆ ಅತ್ಯಂತ ಹೆಚ್ಚು ಅಭಿಮಾನಿಗಳಿರುವುದು ಇದೇ ಮೊದಲಾಗಿದೆ.


ಅಲ್ಲುವಿನ ವಿವಾಹದ ಬಳಿಕ ಬಿಡುಗಡೆಯಾಗುವ ಮೊದಲ ಬಿಗ್‌ಬಜೆಟ್ ಚಿತ್ರ ಎಂಬ ವಿಶೇಷತೆಯೂ ‘ಬದ್ರಿನಾಥ್’ಗಿದೆ. ಆದಿ, ಕೃಷ್ಣ, ದಿಲ್ ಮತ್ತಿತರ ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ವಿ.ವಿ.ವಿನಾಯಕ್ ಬದ್ರಿನಾಥ್‌ನ ನಿರ್ದೇಶಕ. ಅಲ್ಲು ಅಭಿನಯಿಸಿದ ‘ಬನ್ನಿ’ಯ ನಿರ್ದೇಶಕರೂ ಕೂಡಾ ಇದೇ ವಿನಾಯಕ್.

ಬುಧವಾರ, ಮೇ 18, 2011

ಕಚಗುಳಿಯಿಡಲಿದೆ ‘ಡಾಕ್ಟರ್‌ ಲವ್‌’

ವಿನಯಚಂದ್ರನ್‌ ಒಬ್ಬ ಬರಹಗಾರ. ಕವಿತೆ, ಕಥೆಗಳನ್ನು ಬರೆಯುತಾ್ತನಾದರೂ ಆತನಿಗೆ ಇನೊ್ನಂದು ಅತ್ಯಂತ ಮುಖ್ಯವಾದ ಹವಾ್ಯಸವಿದೆ.


ಪ್ರೇಮ ಪ್ರಕರಣಕಕ್ೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹುಡುಕಿ ಪ್ರೇಮಿಗಳನ್ನು ಒಂದು ಸೇರಿಸುವುದರಲ್ಲಿ ವಿನಯಚಂದ್ರನದ್ದು ಸಿದ್ಧಹಸ್ತ. ಏನಿದರ ರಹಸ್ಯ ಎಂದು ಕೇಳಿದರೆ ವಿನಯಚಂದ್ರನಲ್ಲೂ ಉತ್ತರವಿಲ್ಲ. ಹಾಗೆ ಸಂಭವಿಸುತ್ತದೆ, ಅಷ್ಟೆ.
ಒನ್‌ವೇ ಪ್ರೇಮ, ಪರಸ್ಪರ ಬೇರ್ಪಟ್ಟವರು ಹೀಗೆ ಪ್ರೇಮಕಕ್ೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವಿನಯಚಂದ್ರನನ್ನು ಹಲವು ಸಹಪಾಠಿಗಳು ಹುಡುಕಿಕೊಂಡು ಬರುತ್ತಿರುತಾ್ತರೆ. ವಹಿಸಿಕೊಂಡ ಎಲ್ಲ ಪ್ರೇಮ ಪ್ರಕರಣಗಳನ್ನು ಸುಖಾಂತ್ಯಗೊಳಿಸಿದ ವಿನಯಚಂದ್ರನ ಸಾಮರ್ಥ್ಯವನ್ನು ಅರಿತ ಕಾಲೇಜಿನ ಪಿಟಿ ಅಧಾ್ಯಪಕ ಸತ್ಯಶೀಲನ್‌, ವಿನಯಚಂದ್ರನನ್ನು ಸಂಪರ್ಕಿಸಿ ಕೆಲ ವಿಷಯಗಳನ್ನು ಹೇಳುತಾ್ತನೆ.
ಮಾರನೆ ದಿನವೇ ವಿನಯಚಂದ್ರನ್‌ ಕಾಲೇಜಿಗೆ ಸೇರುತಾ್ತನೆ. ವಿದಾ್ಯರ್ಥಿಯಾಗಿಯಲ್ಲ, ಕಾಲೇಜಿನ ಕಾ್ಯಂಟೀನ್‌ನಲ್ಲಿ ಕೆಲಸಗಾರನಾಗಿ. ಆದರೆ ವಿನಯಚಂದ್ರನ ಗುರಿ ಬೇರೊಂದಿರುತ್ತದೆ.
ಕೆಲವೇ ದಿನಗಳಲ್ಲಿ ವಿನಯಚಂದ್ರನ್‌ನ ನೈಜ ಹವಾ್ಯಸಗಳು ವಿದಾ್ಯರ್ಥಿಗಳಿಗೆ ಗೊತಾ್ತಗುತ್ತದೆ. ಆತನನ್ನು ಹುಡುಕಿಕೊಂಡು ವಿದಾ್ಯರ್ಥಿಗಳ ದಂಡೇ ಬರುತ್ತದೆ. ಹಾಗೆ ಅಲ್ಲಿಯೂ ವಿನಯಚಂದ್ರನ್‌ ರೊಮಾನ್‌‌ಸ ಕನ್ಸಲ್ಟಂಟ್‌ ಆಗುತಾ್ತನೆ. ಹೀಗೆ ಕಾ್ಯಂಪಸ್‌ನಲ್ಲಿ ನಡೆಯುವ ಸಾ್ವರಸ್ಯಪೂರ್ಣವೂ, ಕುತೂಹಲಭರಿತವೂ ಆದ ಮುಹೂರ್ತಗಳನ್ನು ‘ಡಾಕ್ಟರ್‌ ಲವ್‌’ ಎಂಬ ಮಲಯಾಳಂ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಕುಂಜಾಕೊ ಬೋಬನ್‌ ವಿನಯಚಂದ್ರನಾಗಿ ಮೆರೆಯುತ್ತಿರುವಾಗ ಸತ್ಯಶೀಲನಾಗಿ ಇನೊ್ನಸೆಂಟ್‌ ಪ್ರತ್ಯಕ್ಷನಾಗುತಾ್ತನೆ. ಭಾವನ ಹಾಗೂ ಅನನ್ಯ ನಾಯಕಿಯರು. ದಿವಾ್ಯ ಉಣ್ಣಿಯ ತಂಗಿ ವಿದಾ್ಯ ಉಣ್ಣಿ ಈ ಚಿತ್ರದ ಮೂಲಕ ಅಭಿನಯ ಕ್ಷೇತ್ರಕಕ್ೆ ಪಾದಾರ್ಪಣೆ ಮಾಡುತ್ತಿದಾ್ದರೆ.
ಸಲೀಂ ಕುಮಾರ್‌, ನೆಡುಮುಡಿ ವೇಣು, ವಿಜಯರಾಘವನ್‌, ಮಣಿಕುಟ್ಟನ್‌, ಭಗತ್‌ ಮಾ್ಯನ್ವಲ್‌, ಪ್ರಕಾಶನ್‌, ಅಜು ವರ್ಗೀಸ್‌, ಹೇಮಂತ್‌, ರಜತ್‌ ಮೆನನ್‌, ಶಾ್ರವಣ್‌, ಹಿಲ್ಟನ್‌, ಅರುಣ್‌, ಕಲಾಭವನ್‌ ರಿಯಾಸ್‌, ಬಿಯೋಣ್‌, ಬೈಜು, ಕೊಚ್ಚು ಪ್ರೇಮನ್‌, ನಿಮಿಷ, ಶಾರಿ, ದಿವ್ಯ, ಬಿಂದು ಪಣ್ಣಿಕಕ್ರ್‌, ಕೆಪಿಎಸಿ ಲಲಿತ, ಜಿಲು, ಧನ್ಯ, ಜಿಕೊಕ್ ಚಿತ್ರದಲ್ಲಿ ಅಭಿನಯಿಸಿದಾ್ದರೆ.
ಯುವ ತಾರೆಗಳನ್ನು ಮುಂದಿಟ್ಟುಕೊಂಡು ಉದಯೋನ್ಮುಖ ನಿರ್ದೇಶಕ ಕೆ.ಬಿಜು ಕಥೆ ಬರೆದು ನಿರ್ದೇಶಿಸುತ್ತಿರುವ ಮಲಯಾಳಂ ಚಿತ್ರವೇ ‘ಡಾಕ್ಟರ್‌ ಲವ್‌’. ‘ಮಮ್ಮಿ ಆ್ಯಂಡ್‌ ಮಿ’ ಎಂಬ ಹಿಟ್‌ ಚಿತ್ರದ ಬಳಿಕ ಜಿತಿನ್‌ ಆರ್ಟಿಸ್‌‌ಟನ ಬಾ್ಯನರ್‌ನಲ್ಲಿ ಜೋಯ್‌ ತೋಮಸ್‌ ಶಕ್ತಿ ಕುಳಂಙ್ಙರ ಈ ಚಿತ್ರವನ್ನು ನಿರ್ಮಿಸಿದಾ್ದರೆ.